ಕಲಾ ೨ : ಕಾಶ್ಮೀರಶೈವಪರಿಭಾಷೆಯಂತೆ ಇದು ಮಾಯೆಯಿಂದ ಹುಟ್ಟಿ, ಅಶುದ್ಧ ಸೃಷ್ಟಿಯ ತತ್ತ್ವಗಳಿಗೆ ಮೂಲವಾಗಿದೆ. ಯಾವುದು ಸ್ವಸ್ವರೂಪಾವೇಶದಿಂದ ಇತರ ವಸ್ತುಗಳನ್ನು ತನ್ನ ಹಾಗೆ ಸಂಕುಚಿತವಾಗಿರುವಂತೆ ನಿಯಮಿಸುತ್ತದೆಯೋ ಹಾಗೆಯೇ ನಡೆಸುತ್ತದೆಯೋ ಅದು ಕಲಾ ಎನ್ನಿಸಿಕೊಳ್ಳುವುದು. ಜೀವಾತ್ಮನ ಸರ್ವಜ್ಞತ್ವ ಸರ್ವಕರ್ತೃತ್ವಾದಿ ಎಲ್ಲ ಕ್ರಿಯಾಶಕ್ತಿಯ ಪ್ರಭಾವಕ್ಕೂ ಕಲಾ ಸಂಕೋಚವನ್ನುಂಟು ಮಾಡುತ್ತದೆ. ಇದರ ಪರಿಣಾಮವಾಗಿ ಜೀವಾತ್ಮ ತನ್ನ ಸಂಕೋಚ ಸ್ಥಿತಿಯನ್ನೇ ಸ್ವರೂಪವೆಂದು ಗ್ರಹಿಸುತ್ತಾನೆ.	(ಜೆ.ಆರ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ